Email : ktdclit@gmail.com  |  Ph:+91 080 22285561 /62/63/65  |  ಕನ್ನಡ  Eng

History of Surgondankoppa

ಈ ಸ್ಥಳದ ಕುರಿತು ಮೌಖಿಕ ಸಾಹಿತ್ಯದಲ್ಲಿ ನಿರೂಪಿತವಾದ ವಿವರಗಳೆಂದರೆ ಭೀಮಾನಾಯ್ಕರ ದಂಪತಿಗಳಿಗೆ ಹನ್ನೆರಡು ವರ್ಷಗಳು ಕಳೆದರೂ ಮಕ್ಕಳಾಗುವುದಿಲ್ಲ. ಅಧಿದೇವತೆಯಾದ ಮರಿಯಮ್ಮನನ್ನು ಧ್ಯಾನಿಸುತ್ತಾರೆ. ನಂತರ ಭೀಮಾನಾಯಕ್ ದಂಪತಿಗಳಿಗೆ ಮೂವರು ಗಂಡು ಮಕ್ಕಳು ಜನಿಸುತ್ತಾರೆ.

ಭೌಗೋಳಿಕವಾಗಿ ವರ್ಣಿತವಾದ ಈ ಪ್ರದೇಶವು ಸೂರಖಂಡ (ಸೂರಗೊಂಡನ ಕೊಪ್ಪ) ಚಿನ್ನಿಕಟ್ಟೆ (ಚೀನಾಪಟಣೇರಯಾಡಿ) ಝಮ್ರಿಝೊಲ್ (ಈಚಲು ಗಿಡಗಳ ಬನ) ದುದಿಯಾ ತಳಾವ (ನಾಗಮಣಿ ಕೆರೆ ಸೇವಾಲಾಲ್‍ರು ಗೋವುಗಳಿಗೆ ನೀರು ಕುಡಿಸುತ್ತಿದ್ದರು)

ಕಾಳೋಕುಂಡೋ (ಕರಿ / ನೀಲಿ ಬಣ್ಣದಂತೆ ಕಾಣುತ್ತಿದ್ದ ನೀರಿನ ಹೊಂಡ) ಚಂದನ ಖೋಳಿ (ಶ್ರೀಗಂಧದ ಗಿಡಗಳಿಂದ ತುಂಬಿದ ಗುಡ್ಡದ ಖ್ವಾರಿ/ ಇಳಿಜಾರು) ಭೂರಿಪಟಾರ್ (ಸಮತಟ್ಟಾದ ಶೀತಲ ಭೂಪ್ರದೇಶ).

ಸದಾ ಜನರ ಏಳಿಗೆಗೆ ಶ್ರಮಿಸುತ್ತಾ ಅವರ ಬದುಕನ್ನು ಉತ್ತಮಪಡಿಸಲು ಹೋರಾಡುತ್ತಾರೆ. ಸೇವಾಲಾಲ್‍ರು ಬಂಜಾರರ ಬಹುದೊಡ್ಡ ಸಂತ ಪುರುಷ.

ಬ್ರಹ್ಮಾಚಾರಿಯಾಗಿದ್ದುಕೊಂಡು ಸದಾ ದೇವರ ಭಕ್ತಿಯಿಂದ ಜನಾಂಗದ ಸೇವೆಯನ್ನು ಮಾಡಿರುವ ಹಿತಚಿಂತಕರು ಅನೇಕ ಉಪದೇಶಗಳನ್ನು ಮಾಡಿ ಜನಾಂಗಕ್ಕೆ ಸಾತ್ವಿಕ ದಾರಿ ತೋರಿದ ಮಾರ್ಗದರ್ಶಕರು.

ಇತರ ಜನರಂತೆ ತಮ್ಮ ಜನರೂ ಸ್ವಚ್ಛತೆಯಿಂದ ಬಾಳಿಬದುಕಬೇಕೆಂಬ ಅಭಿಪ್ರಾಯ ಸೇವಾಬಾಯರದಾಗಿತ್ತು. ಇವರ ಬೋಧನೆ ಚಿಂತನೆಗಳು ಲಿಪಿ ಇಲ್ಲದ ಭಾಷೆಯಾಗಿ ಇಂದು ಸಹ ಜನಾಂಗದಲ್ಲಿ ಮೌಖಿಕವಾಗಿ ಉಳಿದುಕೊಂಡಿದೆ.

ಈ ಮೇಲಿನ ಅಂಶಗಳ ಹಿನ್ನೆಲೆಯಲ್ಲಿ ಸೂರಗೊಂಡನಕೊಪ್ಪವು ಬಂಜಾರರ ಪ್ರಸಿದ್ದ ಯಾತ್ರ ಸ್ಥಳವೆಂಬುದಾಗಿ ಖಚಿತಪಡಿಸಿದೆ. ಈ ಕ್ಷೇತ್ರದ ಬಗ್ಗೆ ಬಂಜಾರ ಸಮುದಾಯವು ಅಚಲವಾದ ನಂಬಿಕೆ ಹಾಗೂ ವಿಶ್ವಾಸ ಹೊಂದಿರುತ್ತಾರೆ.

ಸಂತ ಶ್ರೀ ಸೇವಾಲಾಲ್‍ರು ಮಾತೆ ಧರ್ಮಿಣಿ ಮತ್ತು ಭೀಮನಾಯ್ಕರ ದಂಪತಿಯ ಉದರದಲ್ಲಿ ಫೆಬ್ರವರಿ 15, 1739ರಲ್ಲಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ಜನಿಸಿದರು.History of sevalal birth place

18 ಮತ್ತು 19ನೇ ಶತಮಾನದ ಕಾಲಾವಧಿಯಲ್ಲಿದ್ದ ಶ್ರೀ ಸೇವಾಲಾಲ್ ಒಬ್ಬ ಮಹಾನ್ ಸಂತ ಮತ್ತು ಸಮಾಜ ಸುಧಾರಕ ಆ ಕಾಲಮಾನದಲ್ಲಿ ದಿಕ್ಕುದೆಶೆಯಿಲ್ಲದ ಅಲೆಮಾರಿ ಜೀವನ ನಡೆಸುತ್ತಿದ್ದ ಹಲವಾರು ಸಮುದಾಯಗಳನ್ನು ಶಾಶ್ವತವಾಗಿ ನೆಲೆಯೂರಲು ಪ್ರೇರೇಪಿಸಿದ ಸಂತ, ಅವರ ಕಾಯಕದಲ್ಲಿ ಬದಲಾವಣೆ ತಂದು ಸತ್ಯ ಮಾರ್ಗದಲ್ಲಿ ನಡೆಯಲು ಉಪದೇಶಿಸಿ ಸರಿ ದಾರಿ ತೋರಿಸಿದ ದಾರ್ಶನಿಕ.

ಕಳ್ಳತನ, ದರೋಡೆ, ಕೊಲೆ ಸುಲಿಗೆ ಸ್ತ್ರೀ ಶೋಷಣೆ ಭಟ್ಟಿತಯಾರಿಕೆ, ಮಾಯ ಮಂತ್ರ ಇತ್ಯಾದಿ ಕಾರ್ಯದಲ್ಲಿ ತೊಡಗಿದ್ದ ಸಮುದಾಯಗಳೊಂದಿಗೆ ನಿರಂತರ ಸಂಪರ್ಕವಿಟ್ಟು ಅವರು ಕೈಗೊಂಡಿರುವ ಉದ್ಯೋಗ ನ್ಯಾಯ ಸಮ್ಮತಲ್ಲವೆಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಲು ಜೀವನ ಪರ್ಯಂತ್ರ ಶ್ರಮಿಸಿದ ಸಂತ.

‘ಲಧೇಣಿಯ’ ಎಂಬ ಕಾಯಕದಲ್ಲಿ ತೊಡಗಿ ದಿಕ್ಕು ದಿಶೆಯಿಲ್ಲದೆ ಸ್ಥಳದಿಂದ ಸ್ಥಳಕ್ಕೆ ಕುಟುಂಬ ಸಮೇತರಾಗಿ ಅಲೆದಾಡುತ್ತಿದ್ದ ಬಂಜಾರ (ಲಂಬಾಣಿ) ಸಮುದಾಯದಲ್ಲಿ ಜನ್ಮ ತಾಳಿದ ಈ ಸಂತ ಮೊದಲಿಗೆ ಆ ಸಮುದಾಯದಲ್ಲಿದ್ದ ಅಲೆಮಾರಿ ಪ್ರವೃತ್ತಿ ಕಂದಾಚಾರ, ಸ್ತ್ರೀ ಶೋಷಣೆ, ಅನೈತಿಕ ಆಚರಣೆ, ಕುಡಿತ ಮೋಜು ಮಸ್ತಿ ಇತ್ಯಾದಿ ದುಶ್ಚಟಗಳನ್ನು ತೊಡೆದು ಹಾಕಲು ಶ್ರಮಿಸಿದ್ದಾರೆ. ಅವರು ವಂಶಪಾರಂಪರ್ಯವಾಗಿ ಮಾಡಿಕೊಂಡು ಬಂದಿದ್ದ ಲದೇಣಿಯ ವೃತ್ತಿಯಲ್ಲಿ ಸೀಮಿತ ಪ್ರದೇಶದಲ್ಲ್ಲಷ್ಟೇ ನಡೆಸಲು ಹಾಗೂ ಕುಟುಂಬಸ್ತರನ್ನು ಶಾಶ್ವತವಾಗಿ ಕೆಲ ಸ್ಥಳದಲ್ಲಿ ನೆಲೆಯೂರಲು ಪ್ರೇರೆಪಿಸಿ ಅದರಲ್ಲಿ ಯಶಸ್ವಿಯಾಗುತ್ತಾರೆ.

ಮುಂದೇ ಇದೇ ರೀತಿಯ ಪ್ರಯತ್ನವನ್ನು ಬೀಡ್, ಶಿಕಾರಿ, ವಂಜಾರ, ಢಾಡಿ, ಪಿಂಡಾರಾ ಇತ್ಯಾದಿ ಅಲೆಮಾರಿ ಸಮುದಾಯಗಳಿಗೂ ವಿಸ್ತರಿಸಿ ಅವರ ವೃತ್ತಿ ಮತ್ತು ಜೀವ ಶೈಲಿಯಲ್ಲಿ ಬದಲಾವಣೆ ತರಲು ಹಾಗೂ ಶಾಶ್ವತವಾದ ನೆಲೆಗಳನ್ನು ಕಂಡು ಕೊಳ್ಳಲು ಉಪದೇಶಿಸುತ್ತಾ, ಅದರಲ್ಲೂ ಭಾಗಷಃ ಯಶಸ್ಸನ್ನು ಕಾಣುತ್ತಾರೆ.

ಬ್ರಹ್ಮಚಾರಿಯಾಗುಳಿದ ಸಂತ ಸೇವಾಲಾಲರು ತಮ್ಮ ಪ್ರವಾಸಕ್ಕೆ ಗರಸಿಯಾ ಎಂಬ ಕುದುರೆಯೇರಿ ಜೀವನ ಪರ್ಯಂತ ಅಲೆಮಾರಿ ಸಮುದಾಯಗಳ ಉದ್ದಾರಕ್ಕೆ ಶ್ರಮಿಸುತ್ತಾರೆ. ಮಾರಿಕಾಂಬೆಯ ದೇವಿ ಶಕ್ತಿಯನ್ನು ಹೊಂದಿದ್ದ ಇವರು ತಮ್ಮ ಈ ಶಕ್ತಿಯನ್ನು ಜನರ ಒಳತಿಗಾಗಿ ಮಾತ್ರ ಬಳಸುತ್ತಾ, ಕರ್ನಾಟಕ ಆಂದ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ ಮಾರ್ಗವಾಗಿ ದೆಹಲಿಯವರೆಗೆ ಸಂಚರಿಸಿ ಜನ ಕಲ್ಯಾಣದಲ್ಲಿ ತೊಡಗಿದ್ದವರು ಕೆಲಕಾಲ ತಿರುಪತಿಯ ಹಾತಿರಾಂ ಬಾವಾಜಿ ಮಠದಲ್ಲಿಯೂ ಸೇವಾದಾಸ ಹೆಸರಿನಲ್ಲಿ ಮಹಾಂತರಾಗಿದ್ದುಕೊಂಡು ಬಾಲಾಜಿಗೆ ಸೇವೆ ಸಲ್ಲಿಸಿದ್ದಾರೆ. ಇವರ ಜನಪ್ರಿಯತೆ ಮತ್ತು ಅನುಯಾಯಿಗಳ ಸಂಖ್ಯೆ ಕಂಡು ಶಂಕೆಗೊಳಗಾಗಿದ್ದ ಹೈದರಾಬಾದ್ ನಿಜಾಮರ ಶಂಕೆಯನ್ನು ಅಳಸಿ ಅವರ ರಾಜ್ಯಕ್ಕೆ ಬಂದೊದಗಿದ್ದ ಆಪತ್ತಿನಿಂದ ಪಾರು ಮಾಡಿ ಅವರ ಮನ್ನಣೆಗೂ ಪಾತ್ರರಾಗುತ್ತಾರೆ.Objectives of surgondankoppa

ಸಂತ ಸೇವಾಲಾಲ್ ರವರ ಜನ್ಮ ಕ್ಷೇತ್ರ ಭಾಯಾಗಡ್ (ಸೂರಗೊಂಡನಕೊಪ್ಪ) ಮತ್ತು ಅದರ ಸುತ್ತ ಮುತ್ತಲಿನ ಪ್ರದೇಶಗಳ ಅಭಿವೃದ್ದಿ.

ಸಂತ ಸೇವಾಲಾಲ್ ಕಾರ್ಯ ಕ್ಷೇತ್ರ ಮತ್ತು ಪ್ರವಚನ ನೀಡಿರುವ ಸ್ಥಳಗಳ ಸ್ಥಳಗಳ ಅಭಿವೃದ್ಧಿ ಮತ್ತು ನಿರ್ವಹಣೆ.

ಬಾಯಾಗಡ್ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರಿಗೆ ವಸತಿ ಸೌಲಭ್ಯ, ಸ್ನಾನ ಗೃಹ, ಶೌಚಾಲಯ, ನೀರು ಸರಬರಾಜು, ವಿದ್ಯುತ್ ದೀಪ ಮುಂತಾದ ಮೂಲ ಸೌಲಭ್ಯಗಳನ್ನು ಕಲ್ಪಿಸಿ ನಿರ್ವಹಿಸುವುದು.

ಬಾಯಾಗಡ್ ಮಹಾಮಠದ ಆವರಣದಲ್ಲಿ ಸ್ಥಾಪಿತಗೊಂಡಿರುವ ಕಲಾ ಗೋಡೆಗಳು, ಕಲಾಕೃತಿ ದೃಶ್ಯಾವಳಿ, ತೆರೆದ ಮ್ಯೂಸಿಯಂ, ಉದ್ಯಾನಗಳ ಸಂರಕ್ಷಣೆ ಮತ್ತು ಪ್ರವಾಸಿಗರಿಗೆ ಅವುಗಳ ಪರಿಚಯ.

ಸಂತ ಸೇವಾಲಾಲ್ ರವರು ಬಹುವಾಗಿ ಬಳಸುತ್ತಿದ್ದ ಈತಹಾಸಿಕ ಸ್ಥಳಗಳಾದ ದೂದ್ಯಾ ತಳಾವ್( ಈಗಿನ ಬೂತನಕೆರೆ), ಸಪ್ತ ಮಾತೃಕೆ ಕೊಳಗಳ ಅಭಿವೃದ್ಧಿ ಮತ್ತು ನಿರ್ವಹಣೆ.

ಅಥಿತಿ ಗೃಹ, ಪ್ರತಿಷ್ಠಾನದÀ ಯೋಜನಾ ಕಛೇರಿ, ಸಿಬ್ಬಂಧಿಗಳ ವಸತಿ ಗೃಹ, ಇತ್ಯಾಧಿ ಸೌಲಭ್ಯಗಳನ್ನು ಕಲ್ಪಿಸುವುದು.

ಕ್ಷೇತ್ರಕ್ಕೆ ನಿರಂತರವಾಗಿ ನೀರು ಸರಬರಾಜು ಯೋಜನೆ ಮತ್ತು ಸುತ್ತಮುತ್ತಲಿನ ಕೆರೆಗಳ ಅಭಿವೃದ್ದಿ.

ಮಹಾಮಠದ ಆವರಣಕ್ಕೆ ಲಗತ್ತಾಗಿರುವ ಅರಣ್ಯವನ್ನು ಪರಿಸರ ಪ್ರವಾಸೋಧ್ಯಮಕ್ಕಾಗಿ ಅ ರಣ್ಯ ಇಲಾಖೆ ಮತ್ತು ಇತರೆ ಇಲಾಖೆಗಳ ಸಹಯೋಗದೊಂದಿಗೆ (ಇಕೋ ಟೂರಿಸಂ) ಅಭಿವೃದ್ದಿಪಡಿಸುವುದು.

ವಲಸೆ ಹೋಗುವ ಕುಟಿಂಬದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಸತಿ ಶಾಲೆ, ಕೌಶಲ್ಯ ತರಬೇತಿ ಕೇಂದ್ರ, ಆಸ್ಪತ್ರೆ ಸ್ಥಾಪಿಸುವುದು.

ಸಂತರ ಜೀವನ ಚರಿತ್ರೆ, ಇತಿಹಾಸ, ತತ್ವ, ಸಿದ್ದಾಂತಗಳು ಕೊಡುಗೆ ಕುರಿತು ಅಧ್ಯಯನ, ಸಂಶೋಧನೆ, ಪ್ರಕಟಣೆ ಮತ್ತು ಪ್ರಸಾರ ಕಾರ್ಯಕ್ರಮಗಳು. ಇತ್ಯಾದಿ.