Email : ktdclit@gmail.com  |  Ph:+91 080 22285561 /62/63/65  |  ಕನ್ನಡ  Eng

GOR BANJARA HISTORY


ನಿಸರ್ಗ ಪ್ರಿಯರಾದ ತಾಂಡ ಗೋರ ಬಂಜಾರರ ಸಂಸ್ಕøತಿಯು, ಜಗತ್ತಿನ ಅತೀ ಪುರಾತನ ಪ್ರಖ್ಯಾತ ನಾಗರಿಕತೆಗಳಲ್ಲಿ ಒಂದಾದ ಸಿಂಧು ಕಣಿವೆ ನಾಗರಿಕತೆಯ ಗುಣಲಕ್ಷಣಗಳಿಗೆ ಹೋಲಿಕೆಯಾಗುತ್ತಿರುವುದು ಜೀವಂತ ಸಾಕ್ಷಿ. ಆದ್ದರಿಂದ ಸಿಂಧು ಕಣಿವೆ ನಾಗರಿಕತೆಯ ವಾರಸುದಾರರು ಎಂಬ ಸ್ವಾಭಿಮಾನ ಮೆರೆದ ಗೋರ್ ಬಂಜಾರರು ಭಾರತವಲ್ಲದೆ ವಿಶ್ವದ 114 ದೇಶಗಳಲ್ಲೂ 27 ಪರ್ಯಾಯ ಹೆಸರುಗಳಿಂದ ಗುರುತಿಸಲ್ಪಡುತ್ತಿದ್ದಾರೆ. ಬಂಜಾರರು ಭಾರತದ ಪ್ರಮುಖ ಬುಡಕಟ್ಟುಗಳಲ್ಲಿ ಒಂದಾಗಿದ್ದು, ಭಾರತದ ಇತಿಹಾಸದುದ್ದಕ್ಕೂ ಸೇವೆ ಸಲ್ಲಿಸಿರುವ ಅವರು ಭಾರತದ ಸಂಸ್ಕøತಿಗೆ ನೀಡಿರುವ ಕಾಣಿಕೆ ಮತ್ತು ಪ್ರಾಚೀನತೆಯನ್ನು ಕುರಿತು ನಿಖರವಾದ ಲಿಖಿತ ದಾಖಲೆಗಳು ದೊರೆಯದಿರುವುದು ವಿಪರ್ಯಾಸ. ಚಕ್ರವರ್ತಿ ಅಶೋಕನ ಕಾಲದಿಂದ ಈವರೆಗೂ ಸಹಸ್ರಾರು ಶಾಸನಗಳು ಭಾರತದ ಮೂಲೆ-ಮೂಲೆಗಳಲ್ಲಿ ಕಂಡು ಬಂದರೂ ಕೂಡ ಅವುಗಳಲ್ಲಿಯೂ ಬಂಜಾರರ ಬಗ್ಗೆ ಉಲ್ಲೇಖ ಇರುವುದಿಲ್ಲ. ಹೀಗಾಗಿ ಅವರ ಪ್ರಾಚೀನತೆಯನ್ನು ಖಚಿತವಾಗಿ ಹೇಳುವುದು ಕಷ್ಟ. ಆದರೆ ಬಂಜಾರರ ಸಾಂಪ್ರದಾಯಕ ಜನಪದ ಗೀತೆ ಮತ್ತು ಮೌಖಿಕ ಸಾಹಿತ್ಯದಲ್ಲಿ ಅವರ ಮೂಲ ಮತ್ತು ಸಂಸ್ಕøತಿ ಕುರಿತ ಆಧಾರಗಳು ಹೆಚ್ಚಾಗಿ ಸಿಗುತ್ತಿವೆ.

ಗೋರ್ ಬಂಜಾರರ ಸಂಸ್ಕøತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕೆಲವು ಲೇಖನ ಮತ್ತು ಪ್ರವಾಸಿಗರ ಬರಹಗಳಲ್ಲಿ ಬಂಜಾರರ ಕುರಿತು ಉಲ್ಲೇಖಿಸಲಾಗಿದೆ. ಬಂಜಾರರ ಸಂಸ್ಕøತಿಯು ಜೀವನದ ನಾನಾ ಆಯಾಮು, ಧೇಯ, ತತ್ವ-ಸಿದ್ದಾಂತಗಳ ಸಮನ್ವಯ ಸ್ವರೂಪವಾಗಿರುವುದು ಅವರ ಜನಪದ ಹಾಡು ಮತ್ತು ಮೌಖಿಕ ಸಾಹಿತ್ಯದಿಂದ ಗೋಚರವಾಗುತ್ತದೆ.

ಬಂಜಾರರು ಮೂಲತಃ ಸಂಚಾರಿ ವ್ಯಾಪಾರ ಮಾಡುತ್ತಿದ್ದರು. ಜಾನುವಾರಗಳ ಮೇಲೆ ಲವಣ, ಧವಸ-ಧಾನ್ಯ ಮತ್ತು ಅಗತ್ಯ ವಸ್ತುಗಳನ್ನು ಹೇರಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವ್ಯಾಪಾರ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. 'ಗೋರ್‍ಬೋಲಿ' ಭಾಷೆಯಲ್ಲಿ ಅದನ್ನು “ಲದೇಣಿ” ಎಂದು ಕರೆಯಲಾಗಿದೆ. ಅವರ ಲದೇಣಿ (ಕಾರವಾನ್)ಯು ಕಾಡುಮೇಡು, ನದಿ-ಕೊಳ್ಳ, ಬೆಟ್ಟ-ಗುಡ್ಡ, ಬಯಲು, ಮರಳುಗಾಡು, ಕರಾವಳಿ ಮೂಲಕ ಭಾರತದಾಧ್ಯಂತ ಎಂತಹ ಕಠಿಣ ದುರ್ಗಮ ಮಾರ್ಗದಲ್ಲೂ ನಡೆಯುತ್ತಿತ್ತು. ಅವರು ಸಂಚರಿಸುತ್ತಿದ್ದ ಮಾರ್ಗವನ್ನು “ಲಮಣ್” ಮಾರ್ಗವೆಂದು ಕರೆಯಲಾಗಿದೆ. ಅವರು ಲದೇಣಿ ವ್ಯಾಪಾರ ಮಾಡುತ್ತಿದ್ದ ಸಮಯದಲ್ಲಿ ತಾತ್ಕಾಲಿಕ ವಸತಿಗೆ ಸೂಕ್ಷ್ಮವಾಗಿ ಜಾಗವನ್ನು ಪರಿಶೀಲಿಸಿ, ಎತ್ತರವಾದ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ವಸತಿ ಹೂಡುತ್ತಿದ್ದರು. ಬಂಜಾರ ಎಂಬ ಪದವು ಸಂಸ್ಕøತ ಭಾಷೆಯ ವನ-ಚಾರ ಎಂಬ ಪದದಿಂದ ಬಂದಿದೆ. ಅದರ ಅರ್ಥ ಕಾಡಿನಲ್ಲಿ ಗುಂಪು-ಗುಂಪಾಗಿ ಸಂಚರಿಸುವ ಸಂಚಾರಿಗಳು ಎಂದು ಲಂಬಾಣಿ ಅಥವಾ ಲಮಾಣಿ ಎಂಬ ಪದವು ಸಂಸ್ಕøತ ಭಾಷೆಯ ಲವಣ ಪದದಿಂದ ಬಂದಿರುವುದು. ಅದರ ಅರ್ಥ ಉಪ್ಪು ಎಂದು. ಈ ಎರಡು ಪದಗಳು ಈ ಹಿಂದೆ ಬಂಜಾರರು ಕಾಡಿನ ಅಲೆಮಾರಿಗಳಾಗಿದ್ದು, ಲವಣದ ಸಾಗಾಣಿಕೆಯ ವ್ಯಾಪಾರಿಗಳೆಂದು ಅರ್ಥೈಸಲಾಗಿದೆ. ಅಲೆಮಾರಿಗಳಾಗಿದ್ದ ಬಂಜಾರರು ಭಾರತದ ಸಿಂಧ್ ಪ್ರಾಂತ್ಯದಿಂದ ಬಂದರೆಂಬ ಅಭಿಪ್ರಾಯವಿದೆ. ಕೆಲವರ ಅಭಿಪ್ರಾಯದ ಪ್ರಕಾರ ಬಂಜಾರ ಜನಾಂಗವು ಅಗ್ನಿವಂಶಿ ರಜಪೂತರ ವಂಶದವರೆಂದು ಹೇಳಲಾಗಿದೆ. ಬಂಜಾರ ಜನಾಂಗವನ್ನು ಬಂಜಾರಿ, ಪಿಂಡಾರಿ, ಬಾಂಗಲ, ಬಂಜೋರಿ, ಬಂಜೂರಿ, ಬ್ರಿಂಜಾರಿ, ಲಮಾಣಿ, ಲಂಬಾಣಿ, ಲಂಬಾರ, ಲಭಾಣಿ ಗೋರಮಾಟಿ, ಕೋರ, ಸುಗಾಲಿ, ಸುಕಾಲಿ, ವಂಜಾರಿ, ವಂಜಾರ, ವಾಂಜಿ ಹೀಗೆ ಹಲವಾರು ಹೆಸರುಗಳಿಂದ ಕರೆಯಲಾಗುತ್ತದೆ.

ಬಂಜಾರರು ವಾಸಿಸುವ ಸ್ಥಳವನ್ನು ತಾಂಡಾ, ನಂಗರ್-ನಂಗರಿ ಎಂದು ತಮ್ಮ ಭಾಷೆಯಲ್ಲಿ ಕರೆದುಕೊಳ್ಳುತ್ತಾರೆ. ನಂಗರ್ ಸಂಸ್ಕøತ ಭಾಷೆಯ ನಗರ ಪದದಿಂದ ಬಂದಿದ್ದು, ಇದರರ್ಥ ಬೆಟ್ಟಗಳಂತೆ ಹವೇಲಿ ಉಪ್ಪರಿಗೆಗಳಿರುವ ಸ್ಥಳ, ಪುರ, ಪಟ್ಟಣ, ಕೋಟೆ-ಕೊತ್ತಲಗಳಿಂದ ಯೋಜನಾ ಬದ್ಧವಾದ ವಾಸಸ್ಥಳ. ಇದು ಅವರ ಪೂರ್ವಜರ ಪ್ರಾಚೀನ ಕಾಲದ ಬದುಕಿನ ಮತ್ತು ಅವರ ವಾಸ ಸ್ಥಳದ ಮಾಹಿತಿ ಬಿಂಬಿಸುತ್ತದೆ. ಅದನ್ನು ಗಣನೆಗೆ ತೆಗೆದು ಕೊಂಡರೆ ಅವರ ಮೂಲ ಹರಪ್ಪ ಮಹಂಜೊದಾರೊ ಸಂಸ್ಕøತಿಗೆ ತೆಗೆದುಕೊಂಡು ಹೋಗುತ್ತದೆ. ಬ್ರಿಟೀಷ್ ಆಳ್ವಿಕೆಯಲ್ಲಿ 1921ರಲ್ಲಿ ಲಾಹೋರ್ ಪ್ರದೇಶದಲ್ಲಿ ಭೂಉತ್ಖನನ ಮಾಡಿದಾಗ ಹರಪ್ಪ ಮಹಂಜೊದಾರೊ ಪಟ್ಟಣಗಳು ಬೆಳಕಿಗೆ ಬಂದವು. ಪಟ್ಟಣ ಮಾದರಿಯ ಸಿಂಧು ಕಣಿವೆ ನಾಗರಿಕತೆಯು ಈಜಿಪ್ಟ್, ಗ್ರೀಕ್, ಮೆಸೊಪೊಟೊಮಿಯ, ಬೆಬಿಲಿಯನ, ಸುಮೇರಿಯನ್ ಮತ್ತು ಟೈಗ್ರಸ್ ನದಿ ನಾಗರಿಕತೆಗಳ ಸಮ ಕಾಲಿನದ್ದಾಗಿರುತ್ತದೆ. ಪ್ರಖ್ಯಾತ ಇತಿಹಾಸಕಾರರಾದ ಪಂಡಿತ ಗೌರಿಶಂಕರ ಓಝಾ, ಮತ್ತು ರಾಹುಲ ರವರು ಗೋರ್ ವಂಶಿ ಜನರಿಗೂ ಸಿಂಧೂ ನಾಗರಿಕತೆಗೂ ಅವಿನಾಭಾವ ಸಂಬಂಧ ಇದೆ ಎಂದು ಉಲ್ಲೇಖಿಸಿರುತ್ತಾರೆ.

ಬಂಜಾರರ ಇತಿಹಾಸ ಕುರಿತು ಅವರ ಪೌರಾಣಿಕ ದಂತ ಕಥೆಗಳು ಇವೆ. ಅವುಗಳನ್ನು ವಿಶ್ಲೇಷಿಸಿ, ಚಿಕಿತ್ಸಕ ಬುದ್ಧಿಗೆ ಒಳಪಡಿಸಿ, ಮೂಲವನ್ನು ಕಂಡುಕೊಳ್ಳುವ ಪ್ರಯತ್ನಗಳು ನಡೆದಿವೆ. ಗೋರ್ ಬಂಜಾರರ ಕಾಲ್ಪನಿಕ ಪುರಾಣ ಗೀತೆಯಲ್ಲಿ ಪ್ರಕೃತಿಯ ಸೃಷ್ಟಿ ಮತ್ತು ಬಂಜಾರರ ಮೂಲದ ಅದ್ಭುತವಾದ ವಿವರಣೆ ಈ ಕೆಳಗಿನಂತಿರುತ್ತದೆ.

“ಜಮಿ, ಆಸಮಾನ್, ಚಾಂದ್, ಸೂರತ್, ಪವನ್ ಪಾಣಿ ಮೇಕ್ ಮೇಳಾ
ಮನಕ್ಯಾ ಜಲಮ್: ಮನಕ್ಯಾ ಜಲಮೇರೋ ಧಜ್
ಧಜೇರೋ ಕವರಧಜ್, ಕವರಧಜೇರೋ ಕವರಪಾಳ್
ಕವರಪಾಳೇರೋ ರಾಜಪಾಳ್, ರಾಜಪಾಳೇರೋ ಅಭಯಚಂದ್
ಅಭಯ ಚಂದೇರೋ ರಾಜಾ ದಶರಥ್
ರಾಜಾದಶರಥೇರ್ ರಾಮ್ ಲಚಮಣ್
ರಾಮೇರೋ ರೀಮ್, ರೀಮೇರೋ ವಗಾದ್
ವಗಾದೇರೋ ಜಗಾದ್, ಜಗಾದೇರೋ ಸಂದಲ್
ಸಂದಲೇರೋ ಸರಿಸೂರತ್, ಸರಿಸೂರತೇರೋ ಕಾಸಬ್,
ಕಾಸಬೇರೋ ಕರಣ್, ಕರಣೇರ್ ತೀಡಾ ಅನ್ ಛಾಡಾ
ತೀಡಾರ ನಾತಡ್, ಜೋಗಡ್, ಖೀಮಡ್ ಮೋಟಾ ಅನ್ ಮೊಲಾ,
ನಾತಾಡೇರ್ ವಾಗ್ರೀ, ಜೋಗಡೇರ್ ಜೋಗಿ, ಖೀಮಡೇರ್ ಲವಾರ್
ಮೋಟಾರ್ ಕೋರ್, ಮೋಲಾರ್ ಗೋರ್, ಛಾಡಾರ್ ಹಾಬಲ್
ಆನ್ ಕಾಬಲ್, ಹಾಬಲೇರ್ ಹಿಂದು, ಕಾಬಲೇರ್ ಮುಸಲ್ಮಾನ್


ಈ ಪುರಾಣ ಗೀತೆಯಲ್ಲಿ ಮೊದಲು ಭೂಮಿ, ಆಕಾಶ, ಚಂದ್ರ, ಸೂರ್ಯ ಗಾಳಿ ಮತ್ತು ಜಲ ಸೃಷ್ಠಿ ಗೊಂಡವು ಅವುಗಳಲ್ಲಿ ಮನುಷ್ಯನ ಜನ್ಮವಾಯಿತು. ಧಜ್ ಮೊದಲಿಗರಾಗಿದ್ದು ಅವರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳುಗಳ ಸರಮಾಲೆ ಇರುತ್ತದೆ.

ಗೋರ್ ಬಂಜಾರರ ಮೂಲದ ಮೊಲಾದಾದಾ ರಾಧಾದಾದಿಯ ಕಥೆಯಲ್ಲಿ ಅವರಿಬ್ಬರು ಕೃಷ್ಣನ ಅಪೇಕ್ಷೆಯಂತೆ ದನಕರುಗಳನ್ನು ಕಾಯುತ್ತಾ, ನಿಷ್ಕಳಂಕ, ನಿರ್ಮಲ, ಮನಸ್ಸಿನಿಂದ ಪರಸ್ಪರ ಸಹಯೋಗದ ಸನ್ಯಾಸಿ ಜೀವನ ನಡೆಸುತ್ತಿದ್ದು, ನೃತ್ಯದಲ್ಲಿ ನೈಪುಣ್ಯತೆ ಹೊಂದಿದ ಅವರು ಕಲಾಪ್ರದರ್ಶನವನ್ನು ಮಾಡುತ್ತಾ, ಸಂಚರಿಸುತ್ತಿರುವಾಗ ಜ್ಯೋತಪುರ (ಉದಯಗಡ್), ಅಲ್ಯಾಪುಲ್ಯಾಗಡ್, ಧರುಣಗಡ್ ಈ ಮೂರು ಗಡ್‍ಗಳ ರಾಜರುಗಳನ್ನು ತಮ್ಮ ಕಲಾನೃತ್ಯದ ಪ್ರದರ್ಶನದಿಂದ ಸಂತೋಷ ಪಡಿಸಿ, ಮೂರು ಜನ ಬಾಲಕರನ್ನು ಪಡೆದು ಅವರನ್ನು ಪೋಷಿಸಿ, ದೊಡ್ಡವರಾದಾಗ ಒಬ್ಬ ಬ್ರಾಹ್ಮಣನ ಮೂರು ಜನ ಹೆಣ್ಣುಮಕ್ಕಳೊಂದಿಗೆ ವಿವಾಹ ಮಾಡಿಸಿದರೆಂಬುವುದು ಬಂಜಾರರ ಮೌಖಿಕ ಐತಿಹ ಇದೆ.

ಈ ಹಿನ್ನೆಲೆಯಲ್ಲಿ ಮೊಲಾದಾದಾ ಮತ್ತು ರಾಧಾದಾದಿ ಸಾಕಿದ ರಾಜರುಗಳಿಂದ ಪಡೆದ ಪವಾರ್, ರಾಠೋಡ್ ಮತ್ತು ಚವ್ಹಾಣ್ ಕ್ಷತ್ರೀಯ ಗಂಡುಮಕ್ಕಳು ಮತ್ತು ಅವರುಗಳನ್ನು ಮದುವೆಯಾದ ಬ್ರಾಹ್ಮಣ ಹೆಣ್ಣುಮಕ್ಕಳಿಂದ ಬಂಜಾರರ ಸಂತತಿ ಪ್ರಾರಂಭವಾಯಿತೆಂದು ಮೌಖಿಕವಾಗಿ ಹೇಳಲಾಗಿದೆ. ಕಥೆಯಲ್ಲಿ ಬರುವ ಅಂಶ ವಾಸ್ತವಿಕವಾಗಿರಬೇಕು ಎಂಬುವುದಕ್ಕೆ ಪ್ರಸ್ತುತ ಬಂಜಾರರು ಆಚರಿಸುವ ಸಾಮಾಜಿಕ ಮತ್ತು ಧಾರ್ಮಿಕ ವಿಧಿ-ವಿಧಾನದಲ್ಲಿ ಅವರ ಹೆಸರುಗಳನ್ನು ಬಳಸುತ್ತಿರುವುದು ಸಾಕ್ಷಿಯಾಗಿದೆ.

ಡೂನಿನ (ಡೆಹರಾಡುನ್) ಒಂದು ಕಥೆಯ ಪ್ರಕಾರ ಪಾಂಡವರು ಹಸ್ತಿನಾಪುರದಿಂದ ವನವಾಸಕ್ಕೆ ಹೋದಾಗ ಅವರ ಸಾಮಾನುಗಳನ್ನು ಬಂಜಾರರು ಸಾಗಿಸಿದರಂತೆ ಮತ್ತು ಅವರು ಸಹರಾನ್‍ಪುರ್ ಜಿಲ್ಲೆಯಲ್ಲಿ ದಿಯೋಬಂದ ಎಂಬ ಪಟ್ಟಣವನ್ನು ಕಟ್ಟಿದರೆಂದು ಹೇಳಲಾಗಿದೆ. ಕ್ರಿ.ಪೂ.327ರಲ್ಲಿ ಭಾರತಕ್ಕೆ ದಂಡೆತ್ತಿ ಬಂದ ಅಲೆಗ್ಸಾಂಡರ್ ಬಂಜಾರರನ್ನು ಸೋಲಿಸಿ, ಅವರಲ್ಲಿದ್ದ ಒಂಟೆಗಳನ್ನು ತನ್ನ ಸೈನ್ಯಕ್ಕೆ ಸೇರಿಸಿಕೊಂಡು, ಯುಧ್ದವಾಡಿದನೆಂಬ ಐತಿಹ ಇನ್ನೊಂದಾಗಿದೆ. ಮೌರ್ಯ ಸಾಮ್ರಾಜ್ಯ ಸ್ಥಾಪನೆಯಾದ ಸಮಯದಲ್ಲಿಯು ಬಂಜಾರರು ಉತ್ತರ ಭಾರತದಲ್ಲಿ ವ್ಯಾಪಾರ ನಡೆಸುತ್ತಿದ್ದರು. ಭೌದ್ಧ ವಿಹಾರಗಳಿಗೆ ಸರಕು ಸಾಮಗ್ರಿಗಳನ್ನು ಸರಬರಾಜು ಮಾಡುತ್ತಿದ್ದರೆಂದು ತಿಳಿದು ಬರುತ್ತದೆ. ಕಾಲಕ್ರಮೇಣ ಭೌದ್ಧ ಸಂಘಗಳ ಪ್ರಭಾವ ಕಡಿಮೆಯಾಗಿ ವಿಹಾರಗಳಲ್ಲಿನ ಚಟುವಟಿಕೆಗಳು ಕುಂಠಿತವಾಗಿದ್ದರಿಂದ ಬಂಜಾರರ ವ್ಯಾಪಾರಕ್ಕೆ ತೊಂದರೆಯಾಯಿತು.

“ಪಂಚ ಪಂಚಾಂತ್ ರಾಜ ಭೋಜೇರ್ ಛ ಸಭಾ” ಎಂಬ ನುಡಿಯು ಬಂಜಾರರ ಮೌಖಿಕ ಸಾಹಿತ್ಯದಲ್ಲಿ ಹಲವು ಬಾರಿ ಉಲ್ಲೇಖವಾಗಿರುವುದರಿಂದ ಅವರು ಕ್ರಿ.ಶ. 4ನೇ ಶತಮಾನದಲ್ಲಿಯೇ ಉತ್ತಮ ಸಾಮಾಜಿಕ, ನೈತಿಕ, ಸಾಂಸ್ಕøತಿಕ ಜೀವನ ಕ್ರಮವನ್ನು ನಡೆಸುತ್ತಿದ್ದರೆಂಬುವುದರ ಪುರಾವೆ.

ಮಧ್ಯ ಯುಗದಲ್ಲಿ ಬಂಜಾರರು ಜೀವನೋಪಾಯಕ್ಕಾಗಿ ಕರಕುಶಲ ಮತ್ತು ಹೈನುಗಾರಿಕೆ ವೃತ್ತಿಯಲ್ಲಿ ತೊಡಗಿದ್ದು, ಸದೃಡ ಮೈಕಟ್ಟು, ದೈರ್ಯಶಾಲಿ, ಪ್ರಾಮಾಣಿಕತೆ ಮತ್ತು ನಿಷ್ಠೆಯುಳ್ಳ ಅವರು ಮುಖ್ಯವಾಗಿ ಸರಕು ಸಾಗಾಣಿಕೆಯಲ್ಲಿ ಪರಿಣಿತಿಯನ್ನು ಹೊಂದಿದ್ದರು ಎಂದು ವಿದ್ವಾಂಸರಾದ ರೂಸ್ಸೆಲ್ ಮತ್ತು ಹೀರಾಲಾಲ್ ರವರ ಅಭಿಪ್ರಾಯವಾಗಿದೆ. ಮಧ್ಯ ಯುಗದ ಸುಫಿ ಕವಿ ಮೂಹಮ್ಮದ್ ಜಾಯಿಸ್ ಹೇಳುವಂತೆ, “ತೋರಗಡ್ ಕಾ ಏಕ ಬಂಜಾರಾ ಸಿಂಹಳ್ ದ್ವೀಪ ಚಲಾ ಬೇಪಾರಾ” ಅಂದರೆ ಬಂಜಾರರು ವಿದೇಶಗಳೊಂದಿಗೆ ವ್ಯಾಪಾರ ವಹಿವಾಟು ನಡೆಸುತ್ತಿದ್ದರು ಎಂಬುವುದು ನಿರೂಪಿಸುತ್ತದೆ. ಬಳಿರಾಮ್ ಹೀರಾಮನ್ ಪಾಟೀಲರ ಪ್ರಕಾರ ಬಂಜಾರರು ನೇಪಾಳ್, ಟಿಬೆಟ್, ಬರ್ಮಾ, ಚೀನಾ, ಇರಾನ್, ಕಾಬೂಲ ಮುಂತಾದ ದೇಶಗಳಿಂದ ದವಸ-ಧಾನ್ಯಗಳನ್ನು ತಂದು ಬರಗಾಲಕ್ಕೊಳಗಾದ ಪ್ರದೇಶಗಳಿಗೆ ಸರಬರಾಜು ಮಾಡುತ್ತಿದ್ದು ಮೆಚ್ಚುಗೆಗೆ ಪಾತ್ರರಾಗಿದ್ದರು. ಕ್ರಿ.ಶ. 12ನೇ ಶತಮಾನದವರೆಗೂ ವಿದೇಶಿ ದಾಳಿಕೋರರಿಗೆ ಭಾರತದಲ್ಲಿ ಕಾಲಿರಿಸಲು ತಡೆಯೊಡ್ಡಿದ ವೀರರು ಎಂಬ ಖ್ಯಾತಿ ಗೋರ್ ಬಂಜಾರರಿಗಿದೆ.

ಬಂಜಾರರ ಕುರಿತು ಲಭ್ಯವಿರುವ ಕ್ರಿ.ಶ. 1630ರ ಲಿಖಿತ ಐತಿಹಾಸಿಕ ದಾಖಲೆಯಲ್ಲಿ ಷಹಜಾನ್ ಮತ್ತು ಅವನ ಮಂತ್ರಿ ಅಷಫ್‍ಖಾನ್, ಬಂಜಾರ ವ್ಯಾಪಾರಿಗಳಾದ ಭಂಗಿನಾಯ್ಕ-ಜಂಗಿನಾಯ್ಕ ಇವರುಗಳೊಂದಿಗೆ ಮಾಡಿಕೊಂಡ ಒಪ್ಪಂದದ ತಾಮ್ರ ಶಾಸನದಲ್ಲಿ ಸುವರ್ಣಾಕ್ಷರಗಳಿಂದ ಈ ರೀತಿ ನಿರೂಪಣೆ ಆಗಿರುತ್ತದೆ. “ ರಂಜನ ಕಾ ಪಾನಿ, ಚಪ್ಪರ ಕಾ ಘಾಸ್, ದಿನ ಕಾ ತೀನ್ ಕೂನ್ ಮಾಫ್, ಔರ್ ಜಾಂಹ ಅಷಫ್ ಜಾನ್ ಕೆ ಘೋಡೆ ರಹೆ, ವಹಾ ಭಂಗಿ-ಜಂಗಿ ಕಾ ಬೇಲ್ ” ಇದು ಲಂಬಾಣಿಗರ ಪ್ರಾಮುಖ್ಯತೆಯನ್ನು ಬಿಂಬಿಸುವ ಲಿಖಿತ ದಾಖಲೆ ಆಗಿದೆ.

ಮಖ್ಖನ್‍ಷಾ ಲಭಾಣಾ ಎಂಬ ಬಂಜಾರನು ಹಡಗುಗಳ ಮೂಲಕ ಅಂತರ ದೇಶಿ ವ್ಯಾಪಾರದಲ್ಲಿ ತೊಡಗಿದ್ದನು, ಕ್ರಿ.ಶ. 1665ರಲ್ಲಿ ಅವನ ಹಡಗು ಸರಕು ಸರಂಜಾಮುಗಳನ್ನು ತುಂಬಿಕೊಂಡು ವಿದೇಶಗಳಿಗೆ ಹೋಗುವ ಸಂದರ್ಭದಲ್ಲಿ ಬಿರುಗಾಳಿಗೆ ಸಿಲುಕಿ, ನೀರಿನಲ್ಲಿ ಮುಳುಗುವ ಸ್ಥಿತಿಯಲ್ಲಿದ್ದಾಗ ಅವನು 8ನೇ ಸಿಖ್ ಗುರುಗಳನ್ನು ಪ್ರಾರ್ಥಿಸಲಾಗಿ, ಹಡಗು ಅಪಾಯದಿಂದ ಪಾರಾಗಿ ದಡವನ್ನು ತಲುಪಿತು. ಸಿಖ್ ಗುರುವನ್ನು ಭೇಟಿ ಆಗಿ ಕಾಣಿಕೆ ಕೊಡಲು ಹೋದಾಗ ಸಿಖ್ ಗುರಗಳು ಅಕಾಲಿಕ ಮರಣ ಹೊಂದಿರುವುದು ತಿಳಿದು, 9ನೇ ಸಿಖ್ ಗುರು ಅಮೃತಸರ ಹತ್ತಿರದ ಬಾಕಳಾದಲ್ಲಿ ಇರುವ ಮಾಹಿತಿ ಪಡೆದು, ಅಲ್ಲಿ ಇದ್ದ ಗುರುವೇಷಧಾರಿಗಳಿಗೆ ಎರಡೇರಡು ಬಂಗಾರದ ನಾಣ್ಯಗಳನ್ನು ಹಂಚಲಾಗಿ, ಅವರೆಲ್ಲರು ಸಂತೋಷ ಭರಿತರಾದರು. ಆದರೆ ಒಬ್ಬ ಗುರುವು ನಿನ್ನ ಹಡಗು ಮುಳಗುವಾಗ 500 ಮೊಹರುಗಳನ್ನು ನೀಡುವುದಾಗಿ ಪ್ರಮಾಣಿಸಿದ್ದು, ಮರೆತಿರುವೆಯಾ ಎಂದು ಪ್ರಶ್ನಿಸಿದಾಗ, ಅವರೇ 9ನೇ ಗುರು ಎಂದು ಗುರುತಿಸಿ, ಪಕ್ಕದ ಮನೆಯನ್ನೇರಿ ಗುರು ಲಾದೋರೆ, ಗುರು ಲಾದೋರೆ ಎಂದು ಉದ್ಘರಿಸಿದನು. ಹೀಗೆ ಮಖ್ಖನ್‍ಷಾ ಲಭಾಣಾ 9ನೇ ಗುರುಗಳನ್ನು ಗುರುತಿಸಿ ಕೊಟ್ಟಿದ್ದಕ್ಕಾಗಿ ಇವರ ಪೋಟೋ ಅಮೃತಸರ ಸಿಖ್‍ರ ಗುರುದ್ವಾರದಲ್ಲಿ ಇದೆ.

ರಿಖಬ್ ಗಂಜ್ ಗುರುದ್ವಾರದಲ್ಲಿರುವ ಒಂದು ಅಪೂರ್ವವಾದ ಬರವಣಿಗೆಯ ಪ್ರಕಾರ ಮೊಗಲ ಸಾಮ್ರಾಟ್ ಔÀರಂಗಜೇಬನು ಕ್ರಿ.ಶ. 1675 ಚಾಂದನೀ ಚೌಕದಲ್ಲಿ ಸಿಖ್‍ರ ಒಂಬತ್ತನೇಯ ಗುರು ತೇಗ್‍ಬಹದ್ದೂರ್ ರವರ ಕೊಲೆ ಮಾಡಿಸಿ, ರುಂಡ-ಮುಂಡಗಳನ್ನು ಬೇರ್ಪಡಿಸಿ, ಬೇರೆ ಬೇರೆ ಸ್ಥಳಗಳಲ್ಲಿ ಇರಿಸಿ, ಅವುಗಳನ್ನು ಯಾರು ತೆಗೆದುಕೊಂಡು ಹೊಗದ ಹಾಗೆ ಕಾವಲು ಇರಿಸಿದನು. ಮೊಗಲರ ಕಾವಲು ಸೈನ್ಯದ ಮದ್ಯದಲ್ಲಿ ಲಕ್ಕೀಷಾ ಬಂಜಾರನು ನುಗ್ಗಿ ಯಾರಿಗೂ ಸಿಗದೆ, ಗುರು ತೇಗ್‍ಬಹದ್ದೂರ್ ರವರ ಮುಂಡವನ್ನು ತೆಗೆದುಕೊಂಡು ಹೋಗಿ ಈಗೀನ ಗುರುದ್ವಾರವಿರುವ ಜಾಗದಲ್ಲಿದ್ದ ತನ್ನ ಮನೆಯಲ್ಲಿಟ್ಟು, ಬೆಂಕಿ ಹಚ್ಚಿ ಶವಸಂಸ್ಕಾರಕ್ಕಾಗಿ ಇಡಿ ಮನೆಯನ್ನು ಸುಟ್ಟು ಹಾಕಿದನು. ಇನ್ನೊಬ್ಬ ಬಂಜಾರ ಭಾಯೀಜೇತ್ (ಜೇತಾವತ್), ಎಂಬುವರು ಮೊಗಲರ ಸೈನ್ಯದ ಮಧ್ಯೆ ನುಗ್ಗಿ ಗುರು ತೇಗ್‍ಬಹದ್ದೂರ್ ರುಂಡವನ್ನು ತೆಗೆದುಕೊಂಡು ಯಾರ ಕೈಗೂ ಸಿಗದೇ, ಆ ಗುರುಗಳ ಒಂಬತ್ತು ವರ್ಷದ ಮಗನು, ಹತ್ತನೇ ಸಿಖ್ಖರ ಗುರು ಗೋವಿಂದ್, ತೇಗ್‍ಬಹದ್ದೂರ್ ರವರು ಇದ್ದ ಆನಂದಪುರ್À ಸಾಹೇಬ್ ಎಂಬ ಊರಿಗೆ ಹೋಗಿ, ಅವರ ಮುಂದೆ ಅವರ ತಂದೆಯ ರುಂಡವನ್ನಿಟ್ಟ್ಟು, ಮೊಗಲರನ್ನು ಭಾರತದಿಂದ ಓಡಿಸುವಂತೆ ಪ್ರಮಾಣ ಮಾಡಿಸಿದರು. ಈ ಇಬ್ಬರು ಬಂಜಾರರ ಶೌರ್ಯ ಮತ್ತು ಸಾಹಸ ಸುವರ್ಣಾಕ್ಷರದಲ್ಲಿ ಬರೆದಿಡುವಂತದ್ದಾಗಿದೆ.

ಕೂಂಬರ್ ಲೆಜ್ ವಿದ್ವಾಂಸರು ತನ್ನ ಪುಸ್ತಕ “Some ಂಛಿಛಿouಟಿಣs oಜಿ oಡಿigiಟಿ” ದಲ್ಲಿ ಇಂಗ್ಲೀಷ ಕಮಾಂಡರ್ ಕಾರ್ನ್‍ವಾಲೀಸ್‍ನ್ನು ಬಂಜಾರರ ಮುಖ್ಯಸ್ಥರಲ್ಲಿ ಒಬ್ಬರಾದ ಭಂಗಿಗೆ ಪ್ರಮಾಣ ಪತ್ರವನ್ನು ನೀಡುತ್ತಾನೆ. ಅದರಲ್ಲಿ ಪೇಶ್ವೆ ರಾಜರು ತಮ್ಮ ಪ್ರದೇಶದಲ್ಲಿ ಬಂಜಾರರ ಆಹಾರ ಧಾನ್ಯಗಳನ್ನು ಖರೀದಿಸಲು ಅವಕಾಶ ಮಾಡಿಕೊಡುವುದಲ್ಲದೆ, ಆ ವಸ್ತುಗಳ ಮೇಲೆ ಲೇವಿ ಹಾಕಬಾರದು ಎಂಬುದಕ್ಕೆ ಅವರು ನೀಡಿರುವ ಕಾರಣ ಬಂಜಾರರು ಆಹಾರ ಧಾನ್ಯಗಳನ್ನು ಸಕಾಲದಲ್ಲಿ ಸರಬರಾಜು ಮಾಡುವ ನಿಷ್ಠಾವಂತರಾಗಿರುವರು ಎಂದು ವರ್ಣಿಸಿರುವುದು ಇದರಿಂದ ತಿಳಿದು ಬರುತ್ತದೆ.

ವಿದ್ವಾಂಸ ಐರ್ವಿನ್ ಡಬ್ಲೂ ತನ್ನ ಗ್ರಂಥ “ಂಡಿmಥಿ oಜಿ ಣhe ಒughಚಿಟ”ದಲ್ಲಿ ರಾಜಕೀಯ ಯುದ್ಧ ಪ್ರಾರಂಭವಾದಾಗ ವಿರೋಧಿ ಬಣಗಳ ಆದೇಶದಂತೆ ಬಂಜಾರರು ಯುದ್ಧ ಭೂಮಿಯಲ್ಲಿ ರಜಪೂತ್, ಮರಾಠಾ, ಮೊಹ್ಮಡನ್ ಇಂಗ್ಲೀಷ್ ಮತ್ತು ಪ್ರೆಂಚ್ ಸೈನ್ಯಕ್ಕೆ ಆಹಾರ ಧಾನ್ಯಗಳನ್ನು ನಿಷ್ಠೆಯಿಂದ ಸರಬರಾಜು ಮಾಡುತ್ತಿದ್ದರು. ಕ್ರಿ.ಶ. 1789 ರಿಂದ 1793ರ ವರೆಗೆ ಮೈಸೂರ ಯುದ್ಧ ಸಮಯದಲ್ಲಿ ಬಂಜಾರರು ಆಹಾರ ಧಾನ್ಯಗಳನ್ನು ಸರಬರಾಜು ಮಾಡುತ್ತಿದ್ದರೆಂದು ಬಾಂಬೆ ಪ್ರಾಂತೀಯ ಗೆಜೆಟೀಯರ್‍ದಲ್ಲಿ ನಮೂದಿಸಲಾಗಿದೆ.

ಕ್ರಿ.ಶ.1825 ರಲ್ಲಿ ಭಾರತವನ್ನು ಸಂದರ್ಶಿಸಿದ ಬಿಷಫ್ ಹೇಬರ್ ಇವರು “ಬಂಜಾರರ ಗುಂಪೊಂದನ್ನು ಕಂಡಿದ್ದಾಗಿಯೂ ಅವರು ಉಪ್ಪಿನ ವ್ಯಾಪಾರಿಗಳಾಗಿದ್ದರೆಂದು ಜೊತೆಗೆ ಬಿಲ್ಲು-ಬಾಣ, ಖಡ್ಗ-ಗುರಾಣಿಗಳೊಂದಿಗೆ ಸನ್ನದ್ದರಾಗಿರುತ್ತಿದ್ದರೆಂದು ಹಿರಿಯರು ಮಾತ್ರವಲ್ಲದೆ, ಕಿರಿಯ ವಯಸ್ಸಿನ ಹುಡುಗ-ಹುಡುಗಿಯರು ಆಯುಧಗಳನ್ನು ಧರಿಸಿ ಕೊಂಡಿರುತ್ತಾರೆ ಎಂದು ಆಶ್ಚರ್ಯ ಪಟ್ಟಿರುತ್ತಾರೆ.

ಡಾಲಹೌಸಿ ಬ್ರಿಟಿಷರ ಗವರ್ನರ್ ಜನರಲ್ ಆಗಿ ಭಾರತಕ್ಕೆ ಬಂದ ಮೇಲೆ ಸಾರಿಗೆ ಸಂಚಾರದಲ್ಲಿ ಬದಲಾವಣೆ ತರಲು ಪ್ರಾರಂಭಿಸಿದನು. ಕ್ರಿ.ಶ. 1853ರಲ್ಲಿ ರೈಲ್ವೆ ಹಳಿಯನ್ನು ಬಾಂಬೆಯಿಂದ ಠಾಣಾದವರೆಗೆ ನಿರ್ಮಿಸಿ, ರೈಲ್ವೆ ಮಾರ್ಗ ವಿಸ್ತರಿಸಿದ್ದರಿಂದ ಬಂಜಾರರ ಲದೇಣಿ ವ್ಯಾಪಾರಕ್ಕೆ ಹಿನ್ನಡೆಯಾಯಿತು. ಅರಣ್ಯ ಸಂರಕ್ಷಿಸುವ ನೆಪದಲ್ಲಿ ಬ್ರಿಟೀಷ ಸರ್ಕಾರವು ಕ್ರಿ.ಶ. 1865 ರಲ್ಲಿ ಅರಣ್ಯ ಕಾನೂನು ಜಾರಿಗೆ ತಂದಿದ್ದರಿಂದ ಭಾರತೀಯ ಬುಡಕಟ್ಟುಗಳ ಜೀವನ ವಿಧಾನದ ಮೇಲೆ ತೀವ್ರ ಪರಿಣಾಮ ಬೀರಿತು. ಅದರಲ್ಲಿ ಭಾರತದ ಮೂಲೆ ಮೂಲೆಗೆ ಸಂಚರಿಸಿ, ಲವಣ ಮತ್ತು ಆಹಾರ ಧಾನ್ಯಗಳ ವ್ಯಾಪಾರ ಮಾಡುತ್ತಿದ್ದ ಬಂಜಾರರು ಅರಣ್ಯ ಪ್ರದೇಶದಲ್ಲ್ಲಿ ಸಂಚರಿಸುವುದು ಕಷ್ಟವಾಯಿತು. ಮರಾಠರು, ನಿಜಾಮರು, ಟಿಪ್ಪುಸುಲ್ತಾನರಂತಹ ಭಾರತೀಯ ಸಣ್ಣಪುಟ್ಟ ರಾಜ ಮನೆತನದವರಿಗೆ ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ದವಸ-ಧಾನ್ಯಗಳನ್ನು ಹಾಗೂ ಮದ್ದು ಗುಂಡುಗಳನ್ನು ಲದೇಣಿ ಮೂಲಕ ದುರ್ಗಮ ಮಾರ್ಗದಲ್ಲಿ ಸಂಚರಿಸಿ, ಸರಬರಾಜು ಮಾಡುವುದರ ಜೊತೆಗೆ ಬ್ರಿಟಿಷರ ವಿರುದ್ಧ ರಹಸ್ಯ ಮಾಹಿತಿಗಳನ್ನು ನೀಡುತ್ತಿದ್ದರೆಂದು ತಪ್ಪಾಗಿ ಗ್ರಹಿಸಿ, ಬ್ರಿಟಿಷ್ ಸರ್ಕಾರವು ಕ್ರಿ.ಶ. 1871ರಲ್ಲಿ ಜಾರಿಗೆ ತಂದ ಅಪರಾಧಿ ಬುಡಕಟ್ಟು ಕಾಯ್ದೆ ಅಡಿಯಲ್ಲಿ ಬಂಜಾರರ ಸಮೂದಾಯವÀನ್ನು ಕ್ರಿಮಿನಲ್ ಟ್ರೈಬ್ಸ್ ಪಟ್ಟಿಗೆ ಸೇರಿಸಿತು. ಇದರಿಂದಾಗಿ ಬಂಜಾರರು ತಮ್ಮ ವ್ಯಾಪಾರ ವಾಣಿಜ್ಯ ವೃತ್ತಿಯನ್ನು (ಲದೇನಿ) ಕಳೆದುಕೊಂಡರು. ಅಪರಾಧಿ ಬುಡಕಟ್ಟು ಕಾಯ್ದೆಯಿಂದ ಸಂಕಷ್ಟಕೊಳಗಾದ ಬಂಜಾರರ ಲದೇನಿ ತಂಡಗಳು, ಬ್ರಿಟೀಷರ ದಬ್ಬಾಳಿಕೆಯಿಂದ ತಪ್ಪಿಸಿ ಕೊಳ್ಳಲು ಬೇರೆ ಬೇರೆ ಪ್ರಾಂತ್ಯಗಳಲ್ಲಿ ತಂಡೋಪ ತಂಡವಾಗಿ ಒಂದೆಡೇ ಸೇರಿ, ಮುಂದೆನು ಮಾಡಬೇಕೆಂದು ತೋಚದೆ, ಸಮಾಲೋಚಿಸ ತೊಡಗಿದರು.

ಬಹದ್ದೂರ್ ಬಂಡಾದಲ್ಲಿ ತಿರುಪತಿ ಶ್ರೀ. ವೆಂಕಟೇಶ್ವರ ಸ್ವಾಮಿಯ ಭಕ್ತ ಶ್ರೀ. ಹಾತಿರಾಮ ಬಾವಾಜಿ, ತಪಸ್ಸು ಮಾಡಿರುವುದಾಗಿ ಮತ್ತು ಬಂಜಾರರ ಗುರುಗಳಾದ ಶ್ರೀ ಸಂತ ಸೇವಾಲಾಲ್, ಮೀಟ್ಟು ಭುಕ್ಯಾ ಮುಂತಾದವರು ಸ್ಥಳ ಭೇಟಿ ಮಾಡಿ, ಸಾಮಾಜಿಕ ಮತ್ತು ಧಾರ್ಮಿಕ ಸಂದೇಶಗಳನ್ನು ನೀಡಿರುವುದಾಗಿ ಪ್ರತೀತಿ ಇದೆ. ಅಲ್ಲಿ ಶ್ರೀ. ಬಾವಾಜಿ ಕಟ್ಟೆಯು ಇದ್ದು, ಬಂಜಾರ ಲದೇನಿ ತಂಡಗಳ ಸಾಂಸ್ಕøತಿಕ ಕೇಂದ್ರವಾಗಿತ್ತು. ಅಲ್ಲಿ ಪ್ರತಿ ವರ್ಷ ಲದೇನಿ ತಂಡಗಳು ಸೇರಿ, ಸುಮಾರು 2, 3 ತಿಂಗಳ ಕಾಲ ಉಳಿದು, ಹೋಳಿ ಹಬ್ಬ ಆಚರಣೆ, ಮದುವೆ-ಮುಂಜಿ, ನಸಾಬ-ಹಸಾಬ, ಸಾಮಾಜಿಕ ಸುಧಾರಣೆ ಮುಂತಾದ ವಿಚಾರಗಳ ಬಗ್ಗೆ ಸಮಾಲೋಚಿಸುತ್ತಿದ್ದರು. ಬ್ರಿಟಿಷರು ಬಹದ್ಧೂರ ಬಂಡಾ ಕೋಟೆಯನ್ನು ಗೆದ್ದು, ಬಂಜಾರರ ಚಲನ-ವಲನದ ಮೇಲೆ ನಿಯಂತ್ರಣ ಇಡಲು, ಬಂಜಾರರ 7ಜನ ಪ್ರಮುಖ ನಾಯಕರನ್ನು ಗಲ್ಲಿಗೇರಿಸಲು ಆದೇಶವಿತ್ತನೆಂದು ಹೇಳಲಾಗಿದೆ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವೀರು ವಿಸಳಾವತ್ ಎಂಬ ಬಂಜಾರರ ಮುಖಂಡನು ಲದೇನಿ ತಂಡದ ನಾಯಕರು ಬಹದ್ಧೂರ ಬಂಡಾಕ್ಕೆ ಬರಲು ಕರೆ ನೀಡಲಾಗಿ, ತೊಂಡೋಪ ತಂಡವಾಗಿ ಲದೇನಿ ತಂಡಗಳು ಬಂದು ಸೇರಿದವು. ಬ್ರಿಟೀಷರ ದಬ್ಬಾಳಿಕೆಯಿಂದ ತಪ್ಪಿಸಿ ಕೊಳ್ಳಲು, ಮುಂದೇನು ಮಾಡಬೇಕೆಂಬ ಸಮಾಲೋಚನೆ ನಡೆಸಿದರು. ಲದೇನಿ ವೃತ್ತಿಯನ್ನು ತೊರೆದು, ಅನ್ಯ ರೀತಿಯ ಜೀವನ ನಡೆಸಲು ಕಾಡು-ಮೇಡುಗಳಲ್ಲಿ ಎಲ್ಲೆಲ್ಲಿ ಅವಕಾಶ ಸಿಕ್ಕಲ್ಲಿ ನೆ¯ ನಿಂತರು. ಅವರು ನೆಲೆಸಿದ ಸ್ಥಳಗಳನ್ನು ತಾಂಡಗಳೆಂದು ಕರೆಯುತ್ತಾರೆ.

ಭಾರತವು ಸ್ವಾತಂತ್ರ್ಯವಾದ ನಂತರ 1952ರಲ್ಲಿ ಅಪರಾಧಿ ಬುಡಕಟ್ಟು ಕಾಯ್ದೆಯನ್ನು ರದ್ದುಗೊಳಿಸಿದ್ದರಿಂದ ಬಂಜಾರರು ಇದರಿಂದ ವಿಮುಕ್ತಿ ಪಡೆದರು. ಸ್ವಾತಂತ್ರ್ಯ ಭಾರತದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಬಂಜಾರರನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಡಿ ನೋಟಿಪೈಡ್ ಟ್ರೈಬ್ಸ್, ಹಿಂದುಳಿದ ವರ್ಗ ಹೀಗೆ ಬೇರೆ ಬೇರೆ ವರ್ಗಗಳಿಗೆ ಸೇರಿಸಿದ್ದರಿಂದ ಆಯಾ ವರ್ಗಗಳ ಸೌಲಭ್ಯಗಳನ್ನು ಪಡೆದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಅಭಿವೃದ್ಧಿ ಹೊಂದುತ್ತಿದ್ದಾರೆ. ಬದಲಾದ ಕಾಲದಲ್ಲಿ ಬಂಜಾರರು ಶಿಕ್ಷಣ ಪಡೆದು ಜಾಗೃತರಾಗಿ, ತಮ್ಮ ಸಂಸ್ಕøತಿಯನ್ನು ಉಳಿಸಿ ಬೆಳಸಿ ಅಭಿವೃದ್ಧಿ ಪಡಿಸಲು ಅಣಿಯಾಗಿದ್ದಾರೆ. ಬಂಜಾರರು ಬಲ ವರ್ಧನೆಗಾಗಿ ದೇಶ-ವಿದೇಶಗಳಲ್ಲಿ ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಶೈಕ್ಷಣಿಕವಾಗಿ ಮುಂದುವರೆದ ನಾಯಕರುಗಳು ಸಮಾಜದ ಬಗ್ಗೆ ಚಿಂತಿಸಿ, ಕ್ರಿಯಾ ಶೀಲರಾಗುವುದು ಸದ್ಯದ ಅಗತ್ಯ.

ಬಂಜಾರರ ವಂಶಾವಳಿ ಮತ್ತು ಗೋತ್ರಗಳ ವಿವರ ಕೆಳಗಿನಂತಿದೆ.
ಅ) ರಾಥೋಡ್ (ಭುಕ್ಯ) : 27 ಗೋತ್ :
1. ಆಲೋತ್, 2. ಭಾಣವತ್, 3. ಭಿಲಾವತ್, 4. ದೆಗಾವತ್, 5. ದೀಪಾವತ್, 6. ದೇವ್ಸೋತ್, 7. ದುಂಗಾವತ್, 8. ಝಂಡಾವತ್, 9. ಕಾನವತ್, 10. ಕರಂತೋಟ್, 11. ಖಾತ್ರೋಟ್, 12. ಖೆತಾವತ್, 13. ಖಿಲಾವತ್, 14. ಕೊಡಾವತ್, 15. ಕುಮಾವತ್, 16.ಮೆಘಾವತ್, 17. ಮೆರಾಜೋತ್, 18. ಮೆರಾವತ್, 19. ನೆನಾವತ್, 20. ಪಾತ್ಲೋತ್, 21. ಪಿಥಾವತ್, 22.ರಾಜವತ್, 23. ರಾಮವತ್, 24. ರಾತ್ಲಾ/ಫುಲಿಯ, 25. ರಣ್ಸೋತ್, 26. ಸಂಗಾವತ್, 27. ಸೋತ್ಕಿ.

ಆ) ಪವಾರ್ (ಜಾತ್) 12 ಗೋತ್ :
1. ಆಮ್ಗೋತ್, 2. ಇವತ್ ಪಮ್ಮಾರ, 3. ಬಾಣಿ, 4. ಚೈವತ್ ಪಮ್ಮಾರ್, 5. ಇಂಜ್ರಾವತ್, 6. ಇನ್ಲೊತ್ ಪಮ್ಮಾರ್, 7. ಝರಪ್ಲಾ, 8. ಲುಣ್ಸಾವತ್/ನುನ್ಸಾವತ್, 9. ಪಮಾಡಿಂiÀi 10. ತಾರಾಬಾಣಿ, 11. ವಾಂಕ್ಡೋತ್, 12. ವಿಸ್ಲಾವತ್.

ಬ) ಚವಾಣ್/ಚವ್ಹಾಣ್ 6 ಗೋತ್ :
1. ಮೂಡ್ 2. ಕೆಳೂತ್, 3. ಕೋರ್ರ, 4. ಸಬಾವಟ್ 5. ಪಾಲ್ತ್ಯಾ, 6. ಲಾವಡಿಯ

ಭ) ವಡಿತ್ಯಾ/ಜಾಧವ್ 32 ಗೋತ್ :
1. ಅಜ್ಮೇರಾ, 2. ಬಾದಾವತ್, 3. ಬರ್ಮಾವತ್, 4. ಭಗ್ವಾನ್ದಾಸ್, 5. ಭಾರೋತ್, 6. ಬೋಡಾ, 7. ಧಾರಾವತ್, 8. ದುಂಗರೊತಿ, 9. ಗಂಗಾವತ್, 10. ಗೋರ್ರಾಮ್, 11. ಗುಗ್ಲೋತ್, 12. ಹಲಾವತ್, 13. ಜಾಧವ್, 14. ಜಾಲೊತ್, 15. ಜ್ಯಾತ್, 16. ಕಾಗ್ಲಾ, 17. ಕುಂಸೊತ್, 18. ಲೊಕಾವತ್, 19. ಲೊಣಾವತ್, 20. ಲೂಣಾವತ್, 21. ಮಾಲೊತ್, 22. ಮೊಹನ್ದಾಸ್, 23. ಪಿಪಾವತ್, 24. ಪೂಸ್ನಮಲ್, 25. ಸಲಾವತ್, 26. ಸೆಜಾವತ್, 27. ತೆಜಾವತ್, 28. ತೆಪಾವತ್, 29. ತೆರಾವತ್, 30. ತುವಾರ್, 31. ಉಚಿದಾವತ್ 32. ವಡೇರ್‍ಜಾಡ್

ಇ) ಬಾಣ್ಣೋತ್/ಅಡೆ 15 ಗೋತ್ :
1. ಆಡೋತ್, 2. ಅಡೆ, 3. ಬಾಣೋತ್, 4. ಭೊಜಾವತ್, 5. ದಾನಾವತ್, 6. ಧರಮ್‍ಸೋತ್, 7. ಧೀರಾವತ್, 8. ಜಾತ್ರೋತ್, 9. ಕರ್ನಾವತ್, 10. ಕುಂತಾವತ್, 11. ಲಾವೊರಿ, 12. ಮುದಾವತ್, 13. ಪಾನಾವತ್, 14. ರುಪಾವತ್, 15. ಸಬ್ದಸೊತ್.

ಪ್ರಸ್ತುತ ಬಂಜಾರರು ಭಾರತದ 21 ರಾಜ್ಯಗಳಲ್ಲಿ ಮತ್ತು ಪ್ರಪಂಚದದಾದ್ಯಂತ ಸುಮಾರು 114 ದೇಶಗಳಲ್ಲಿ ನೆಲೆಸಿರುವರು. ಬೇರೆ ಬೇರೆ ಭಾಷೆ, ಸಂಸ್ಕøತಿಗಳ ಪ್ರಭಾವಕ್ಕೊಳಗಾಗಿದ್ದರೂ ಬಂಜಾರರ ಭಾಷೆ, ಕಲೆ, ಸಂಸ್ಕøತಿ, ಆಚಾರ-ವಿಚಾರ, ಮದುವೆ-ಮುಂಜಿ, ಆಹಾರ-ವಿಹಾರ, ವೇಷ-ಭೂಷಣ, ರೀತಿ-ರಿವಾಜು, ರೂಡಿ-ಸಂಪ್ರದಾಯ, ನಸಾಬ-ಸಬಾಬ, ದೈವ-ನಂಬಿಕೆ, ಪೂಜೆ-ಪುನಸ್ಕಾರ, ಹಬ್ಬ-ಹರಿದಿನಗಳ ಆಚರಣೆಯನ್ನು ಇಂದಿಗೂ ಉಳಿಸಿಕೊಂಡು ಬಂದಿರುವುದು, ಅವರ ಸಂಸ್ಕøತಿ ಬಗ್ಗೆ ಅವರಿಗಿರುವ ಸ್ವಾಭಿಮಾನದ ಪ್ರತೀಕವಾಗಿದೆ.

ಸಾಂಪ್ರದಾಯಕ ವಾಜಾ


ವಾಜಾ ವಾದ್ಯ ಸಂಗೀತದ ಹಿನ್ನೆಲೆಯನ್ನು ಕಂಡುಕೊಳ್ಳಲು ಬಂಜಾರರ ಜಾನಪದ ಹಾಡುಗಳು ಸಹಾಯಕವಾಗಿವೆ. ಮನರಂಜನೆ ಮತ್ತು ಪ್ರಾರ್ಥನೆಗಾಗಿ ಎಂಟು ವಿಧದ ವಾಜಾ ವಾದ್ಯಗಳನ್ನು ಬಳಸಿತ್ತಿರುವರು.
1) ವಾಸಳಿ (ಕೊಳಲು) ಬಳಸುವ ವಾಜಾವನ್ನು ವಾಸುಳಿವಾಜಾವೆಂದು ಕರೆಯುತ್ತಾರೆ.
2) ಢಾಡಿ ಗಾಯಕರು ಡಪಡಿ (ಡಪಲಿ) ಬಳಸಿದ ಸಂಗೀತವನ್ನು ಡಪಡಿ ವಾಜಾವೆಂದು ಕರೆಯುತ್ತಾರೆ.
3) ಡಪಡಾ ಬಳಸಿದ ಸಂಗೀತವನ್ನು (ದೊಡ್ಡ ಡಪಲಿ) ಡಪಡಾ ವಾಜಾವೆಂದು ಕರೆಯುತ್ತಾರೆ.
4) ಸಾರಂಗಿ(ತಂಬೂರಿ) ಬಳಸಿ ಹಾಡುವುದನ್ನು ಸಾರಂಗಿವಾಜಾವೆಂದು ಕರೆಯುತ್ತಾರೆ.
5) ಥಾಳಿ ಬಳಸಿದ ಸಂಗೀತವನ್ನು ಥಾಳಿವಾಜಾವೆಂದು ಕರೆಯುತ್ತಾರೆ.
6) ಝಾಂಜ್ ಬಳಸುವುದನ್ನು ಝಾಂಜ್ ವಾಜಾವೆಂದು ಕರೆಯುತ್ತಾರೆ.
7) ಡೊಲಕ್/ತಬಲಾಥಾಳಿ/ಝಾಂಜ್ ಬಳಸಿ ಹಾಡುವುದನ್ನು ತಬಲಾ/ಡೋಲಕ ವಾಜಾ ಅಥವಾ ನಾಣಕಿಯಾ(ಸಣ್ಣ) ವಾಜಾವೆಂದು ಮತ್ತು
8) ನಗಾರಿ ಥಾಳಿ ಝಾಂಜ್ ಬಳಸಿ ಹಾಡುವುದನ್ನು ಬಂಜಾರರ ಸಾಂಪ್ರದಾಯಕ ವಾಜಾ ಅಥವಾ ಮೊಟೊ ವಾಜಾವೆಂದು ವಿಂಗÀಡಿಸಬಹುದು.

ಬಂಜಾರ ಮಹಿಳೆಯರ ಸಾಂಪ್ರದಾಯಕ ನೃತ್ಯ (ಗೋರ್ ಯಾಡಿ ಭೇನೆರ ನಾಚ್)


ಬಂಜಾರ ಸ್ತ್ರೀಯರ ಈ ಮೇಲಿನ ಎಲ್ಲಾ ನೃತ್ಯಗಳನ್ನು ನರ್ತಿಸುವಾಗ ಕೇಳಿಬರುವ ಕಾಲುಗೆಜ್ಜೆಯ ಸದ್ದು, ಕೈಯಾಡಿಸುವಾಗ ಕೇಳಿಬರುವ ದಂತದ ಬಳೆಗಳ ಸಪ್ಪಳ, ಗುಂಪು ಹಾಡಿಕೆಯ ಇಂಪುದನಿ, ಬಾಗಿ ಕುಣಿಯುವಾಗ ಇಳಿ ಬೀಳುವ ಮುಂಗೂದಲಿನ ಕುಚ್ಚುಗಳ ಸೊಗಸು, ಕೈಬೀಸಿ ಆಡುವಾಗ ಉಂಟಾಗುವ ಮೇಲು ಹೊದಿಕೆ ಹಾಗೂ ಕವಡೆ ಸರಗಳ ಚೆಲ್ಲಾಟ, ಹಾಡಿನ ಸಾಲು ತಪ್ಪಿದಾಗ ನಾಯಕಿಯ ಮುಖದಲ್ಲಿ ಕಾಣುವ ನಸುಗೋಪ, ಸಾಲು ಸರಿಯಾದಾಗ ಎಲ್ಲರ ಮುಖದಲ್ಲೂ ಮಿಂಚುವ ಮಂದಹಾಸ ಇವನ್ನೆಲ್ಲ ಪ್ರತ್ಯಕ್ಷವಾಗಿ ನೋಡಿಯೇ ಆಸ್ವಾದಿಸಬೇಕು.

ಬಂಜಾರ ಪುರುಷರು ಜಾತ್ರೆ-ಉತ್ಸವ, ಹಬ್ಬ ಹಾಗೂ ವಿಶೇಷ ಸಂದರ್ಭಗಳಲ್ಲಿ ಮಾತ್ರ ನರ್ತಿಸುತ್ತಾರೆ. ಇನ್ನುಳಿದಂತೆ ವಾಝಾ ಭಜನ್ ಗೀತೆಗಳೊಂದಿಗೆ ತೃಪ್ತಿಪಡುತ್ತಾರೆ. ಪುರುಷರ ಎಲ್ಲಾ ಬಗೆಯ ನೃತ್ಯಗಳಿಗೆ ವಾದ್ಯಗಳು ಅಗತ್ಯವಾಗಿವೆ. ಬಂಜಾರರ ಲೇಂಗೀ ನೃತ್ಯ ತುಂಬ ಆಕರ್ಷಣಿಯವಾಗಿದೆ.

“ಉಂಚೀ ಹವೇಲೀರೋ ಬೇಸಣ, ಗೋರೀಯೇ ಉಂಚೀ ಹವೇಲೀರೋ ಬೇಸೇಣೋ
ಜೆರೆ ನೀಚೇ ಜೆರೆ ನೀಚೇ ಸನಾರಕೇರೀ ಸಾತ್, ಮೋಲಾಲರ,
ಮೋಲಾಲರ, ಗೋರೀನ ಮೂಂಗಾ ಮೋಲೆರೋ ಭುರಿಯಾ
ತಾರೋ ಭುರಿಯ ಚಮಕ್ ಝಂಡಿ ಝೋಲೇಮ ಗೋರೀಯೇ
ಭುರಿಯ ಚಮಕ್ ಝಂಡಿ ಝೋಲೇಮ”


ಈ ಮೇಲಿನ ನೃತ್ಯ ಗೀತೆಯಲ್ಲಿ ಬಂಜಾರ ಸಮುದಾಯದ ಪುರಾತನ ಸಿರಿವಂತಿಕೆ, ಸಮೃದ್ಧಿಯಾದ ಸಾಹಿತ್ಯ, ಗೆಳತಿಯರ ನಡುವಿನ ನವಿರಾದ ಸಂವಾದ ನಾವು ಗಮನಿಸಬಹುದು. “ಹವೇಲಿ” “ಭುರಿಯಾ” “ಮುಂಗಾಮೋಲ್” ಈ ಗೀತೆಯಲ್ಲಿ ನಿಸರ್ಗಪ್ರಿಯ ಬಂಜಾರರಿಗೆ ನಿಸರ್ಗದ ಆರಾಧನೆಯೇ ಈ ನೃತ್ಯ ಕಲೆಗೆ ಪ್ರೇರಣೆ, ನೃತ್ಯ ಗೀತೆಗಳು ಇವರ ಜೀವನದಲ್ಲಿ ಮಿಳಿತವಾಗಿವೆ. ಬಂಜಾರ ಜನಪದ ಗೀತ ನೃತ್ಯಗಳು ಯಾವುದೇ ನಾಟ್ಯಶಾಲೆ ತರಬೇತಿ ಇಲ್ಲದೆ ರಕ್ತಗತವಾಗಿ ಬಂದಿರುತ್ತವೆ. ಹಾಗೂ ಇವರ ಹೋರಾಟದ ಬದುಕಿನ ಉಸಿರಾಗಿವೆ.

ಘೂಮರ್ ನೃತ್ಯ


ಲೇಂಗಿ ನೃತ್ಯ

ಹೋಳಿ ಮತ್ತು ಲೇಂಗಿ ನೃತ್ಯದ ಹಿನ್ನಲೆ:


ನಂಗಾರ ಠೋಳಿ ಬಿಡಿಸುವ ನೃತ್ಯ


ಸಾಂಪ್ರದಾಯಕ ಮಹಿಳಾ ಗಾಯನ


ಸುಗಮ ಸಂಗೀತ